Friday, 28 April 2017

ಸೌಂದರ್ಯ ಸಲಹೆಗಳು - 08 : ಪ್ರಾಕೃತಿಕ ಮಾಯಿಶರೈಸರ್ ಬಗ್ಗೆ ನಿಮಗೆ ಗೊತ್ತೇ !

ಕೆಲವರಿಗೆ ಅಂಗಡಿಯಲ್ಲಿ ಸಿಗುವ ಮಾಯಿಸ್ಚರೈಸರ್ ಬಳಕೆ ಮಾಡಲು ಇಷ್ಟ ಆಗುವುದಿಲ್ಲ. ಇನ್ನು ಕೆಲವರಿಗೆ ಅದರಿಂದ ಅಲರ್ಜಿ ಉಂಟಾಗುತ್ತದೆ. ಅಂತಹವರಿಗೆಂದು ಕೆಲವೊಂದು ಪ್ರಾಕೃತಿಕ ಮಾಯಿಶ್ಚರೈಸರ್ ಗಳ ಬಗ್ಗೆ ನೀಡಲಾಗಿದೆ. ಅವುಗಳನ್ನು ಬಳಸಿ ಚರ್ಮದ ರಕ್ಷಣೆ ಮಾಡಿಕೊಳ್ಳಿ.



*ಜೇನು, ಮೊಟ್ಟೆಯ ಬಿಳಿ ಭಾಗ, ಬಾಳೆಹಣ್ಣಿನ ಸಿಪ್ಪೆ,ಕ್ಯಾರೆಟ್ ತುರಿ, ಇಲ್ಲವೇ ಗಡ್ದೆ ಕೋಸು ಇವುಗಳಲ್ಲಿ ಯಾವುದಾದರು ಒಂದರ ಪ್ಯಾಕ್ ಮುಖಕ್ಕೆ ಲೇಪಿಸಿ. ಮೊಟ್ಟೆ ಮತ್ತು ಜೇನನ್ನು ಹೊರತು ಪಡಿಸಿ ಉಳಿದವಕ್ಕೆ ಮೊಸರು ಇಲ್ಲವೇ ಮಜ್ಜಿಗೆಯಿಂದ ರುಬ್ಬಿ ಪ್ಯಾಕ್ ಹಾಕಿಕೊಳ್ಳಿ.

*ಕ್ಯಾಕ್ಟಸ್, ನಿಂಬೆ ರಸ ಮತ್ತು ಅಲುವಿರಾಗಳ ಮಿಶ್ರಣವು ಸಹ ಚರ್ಮದ ತಾಜಾತನ ಕಾಪಾಡುತ್ತದೆ. ಆದರೆ ಇದು ಕೆಲವರಿಗೆ ಅಲರ್ಜಿ ಉಂಟು ಮಾಡುತ್ತದೆ. ಆ ಬಗ್ಗೆ ಗಮನ ಇರಲಿ.

*ಗೋಧಿ, ಗಡ್ಡೆ ಕೋಸು , ಕ್ಯಾರೆಟ್ ಮತ್ತು ಬಾದಾಮಿಗಳ ಮಿಶ್ರಣವು ಸಹ ಚಳಿಗಾಲಕ್ಕೆ ಹೆಚ್ಚು ಉಪಯುಕ್ತ.

ಸೌಂದರ್ಯ ಸಲಹೆಗಳು - 07 : ಎಲೆಲೆ ನೆಲ್ಲಿ ನಿನಗೆ ಸಾಟಿ ಯಾರಿಲ್ಲಿ ?

ನೆಲ್ಲಿ ಕಾಯಿಯ ಪ್ರಯೋಜನಗಳು ಅನೇಕ. ಬೆಟ್ಟದ ನೆಲ್ಲಿಕಾಯಿ ಕೇವಲ ಕಾಯಿ ಮಾತ್ರವಲ್ಲ, ತೊಗಟೆ, ಬೇರು, ಎಲೆ ಎಲ್ಲವು ಅತ್ಯಂತ ಪ್ರಯೋಜನಕಾರಿ ಸೌಂದರ್ಯ ವರ್ಧನೆಗೆ !



ಮುಖದ ಮೇಲಿನ ನೆರಿಗೆ, ಸುಕ್ಕುಗಟ್ಟುವಿಕೆಯನ್ನು ನೆಲ್ಲಿಕಾಯಿಯ ರಸ ದೂರ ಮಾಡುತ್ತದೆ. ಅದನ್ನು ದಿನಕ್ಕೊಮ್ಮೆ ಹಚ್ಚಿ ತನ್ನಿರಲ್ಲಿ ಮುಖ ತೊಳೆಯ ಬೇಕು. ಈಗ ಅದರ ಸೀಸನ್ ಆದ ಕಾರಣ ಮಾರುಕಟ್ಟೆಯಿಂದ ತಂದು ಸದುಪಯೋಗ ಮಾಡಿಕೊಳ್ಳಿ .

ತಲೆಯ ಹೊಟ್ಟು, ಬಿಳಿಕೂದಲು ನಿವಾರಣೆಗೆ ನೆಲ್ಲಿಕಾಯಿ ರಸವನ್ನು ಲೇಪಿಸಿ.
ಇದು ಉತ್ತಮ ಕಂಡೀಶನರ್ .ಕಾಂತಿಯುತ ತಲೆಗೂದಲು ಬೆಳೆಯಲು ಸಹಕಾರಿ.
ಕೂದಲ ಸೊಂಪಾದ ಬೆಳವಣಿಗೆಗೆ ನೆಲ್ಲಿಕಾಯಿಯಿಂದ ತಯಾರಿಸಿದ ಎಣ್ಣೆ ತುಂಬಾ ಉತ್ತಮ. ಅದನ್ನು ಕನಿಷ್ಠ ವಾರಕ್ಕೆರಡು ಬಾರಿ ಹಚ್ಚುತ್ತಾ ಇದ್ದಾರೆ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಇದು ರಕ್ತ್ ಶುದ್ಧಿ ಮಾಡುವ ಗುಣವನ್ನು ಹೊಂದಿರುವುದರಿಂದ ಮೊಡವೆ ದೂರ ಮಾಡಲು ಹೆಚ್ಚು ಪ್ರಯೋಜನಕಾರಿ. ತಪ್ಪದೆ ಇದರ ರಸವನ್ನು ಸೇವಿಸಿ, ಅದೇ ರೀತಿ
ಮುಖದ ಮೇಲಿನ ಮೊಡವೆ ನಿವಾರಣೆಗೂ ನೆಲ್ಲಿಕಾಯಿ ಪ್ರಯೋಜನಕಾರಿ.

ಸೌಂದರ್ಯ ಸಲಹೆಗಳು - 07 : ಕಣ್ಣಿನ ಆರೋಗ್ಯಕ್ಕಾಗಿ ಒಂದಷ್ಟು ...!

ಕಣ್ಣು ಸೌಂದರ್ಯ ಮತ್ತು ಆತ್ಮವಿಶ್ವಾಸಕ್ಕೆ ಪ್ರತೀಕ. ಇದು ಮುಖದ ಸೌಂದರ್ಯ ಆಕರ್ಷಣೀಯವಾಗಿ ಇರಬೇಕೆಂದರೆ ಕಣ್ಣಿನ ಹೊಳಪು ಸುಂದರವಾಗಿರ ಬೇಕು ಎನ್ನುತ್ತಾರೆ ತಜ್ಞರು. ಆದ್ದರಿಂದ ಸೌಂದರ್ಯ ವರ್ಣಿಸಬೇಕೆಂದರೆ ಕಣ್ಣಿನ ಬಗ್ಗೆ ಬರೆಯುವುದು- ಹೇಳುವುದು ಸಾಮಾನ್ಯ ಸಂಗತಿ. ಮುತ್ತಿನಂತಹ, ದುಂಬಿಯಂತಹ ಕಣ್ಣು ಎಂದೆಲ್ಲ ವರ್ಣಿಸುವುದು ಸಾಮಾನ್ಯ.



ಆದರೆ ಅನೇಕ ಕಾರಣಗಳಿಂದ ಕಣ್ಣುಗಳು ಕಳಾಹೀನವಾಗುತ್ತದೆ. ಇದಕ್ಕೆ ಮುಖ್ಯ ಕಾರಣಗಳು ಏನೇ ಇದ್ದರೂ, ಮನಸ್ಸಿಗೆ ಕಿರಿಕಿರಿ ಆಗುವುದು ಸಹಜ. ಅದರಲ್ಲೂ ಕಣ್ಣಿನ ಕೆಳಗೆ ಉಬ್ಬಿದಂತೆ ಇದ್ದರೆ, ಕಪ್ಪು ವರ್ತುಲದಂತಹ ಸಮಸ್ಯೆಗಳು ಇದ್ದಾಗ ನಮ್ಮಲ್ಲಿ ಆತ್ಮವಿಶ್ವಾಸವೇ ದೂರವಾಗುತ್ತದೆ.

ಒಂದು ಕರವಸ್ತ್ರ ಇಲ್ಲವೇ ಚಿಕ್ಕ ಟವೆಲಿನಲ್ಲಿ ಐಸ್ ಕ್ಯೂಬ್ ಇಟ್ಟು ಸ್ವಲ್ಪ ಕಾಲ ಕಣ್ಣಿನ ಮೇಲಿಡಿ.

ಹಸಿಯಾದ ಆಲುಗಡ್ಡೆ ತುರಿದು ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ
ಸೌತೆ ಕಾಯಿಯನ್ನು ಸಹ ಇದೆ ರೀತಿ ಮಾಡ ಬಹುದಾಗಿದೆ.

ಸಮಯಕ್ಕೆ ಸರಿಯಾಗಿ ನಿದ್ರಿಸಿ, ಅನಗತ್ಯ ಸಂಗತಿಗಳ ಬಗ್ಗೆ ಚಿಂತೆ ಮಾಡದಿರಿ.

ದೇಹಕ್ಕೆ ವ್ಯಾಯಾಮ ಅತ್ಯಗತ್ಯ . ನಿರಂತವಾದ ವ್ಯಾಯಾಮ ಮಾಡುವುದರಿಂದ ಕಣ್ಣಿನ ಕೆಳಗೆ ಇರುವ ಉಬ್ಬು ದೂರ ಮಾಡ ಬಹುದಾಗಿದೆ. ಉಪ್ಪಿನ ಪ್ರಮಾಣದ ಬಳಕೆ ಮಿತಿಯಲ್ಲಿರಲಿ .

ಹೀಗೆ ಸಣ್ಣ ಪುಟ್ಟ ಸಂಗತಿಗಳು ನಿಮ್ಮ ಕಣ್ಣನ್ನು ಸುಂದರವಾಗಿಡುತ್ತದೆ.

Thursday, 27 April 2017

ಸೌಂದರ್ಯ ಸಲಹೆಗಳು - 06 : 'ತಲೆಹೊಟ್ಟು' ನಿವಾರಿಸುವ ಪವರ್ ಇಂತಹ ಹಳ್ಳಿಗಾಡಿನ ಎಣ್ಣೆಯಲ್ಲಿದೆ!

ತಲೆಹೊಟ್ಟು ಭಾರೀ ಕಿರಿಕಿರಿಯನ್ನು ಉಂಟು ಮಾಡುವಂತಹ ಸಮಸ್ಯೆಯಾಗಿದೆ. ಅದರಲ್ಲೂ ಚಳಿಗಾಲದಲ್ಲಿ ತಲೆಹೊಟ್ಟು ಮಹಿಳೆಯರು ಹಾಗೂ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ತಲೆಹೊಟ್ಟಿನ ನಿವಾರಣೆಗೆ ಹಲವಾರು ರೀತಿಯ ಶಾಂಪೂಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಬಳಸಿಕೊಂಡು ತಲೆಹೊಟ್ಟು ನಿವಾರಣೆ ಮಾಡಬಹುದು. ಥತ್!

ಆದರೆ ಇದರ ಪರಿಣಾಮ ಮಾತ್ರ ಸ್ವಲ್ಪ ಸಮಯ ಮಾತ್ರ. ಮತ್ತೆ ತಲೆಹೊಟ್ಟು ಕಾಣಿಸಿಕೊಂಡು ಸಮಸ್ಯೆಯನ್ನು ತಂದೊಡ್ಡಬಹುದು. ತಲೆಹೊಟ್ಟಿನಿಂದಾಗಿ ಮೊಡವೆಗಳು, ಒಣಚರ್ಮ ಮತ್ತು ಬೊಕ್ಕೆಗಳು ಕಾಣಿಸಿಕೊಳ್ಳಬಹುದು. ಇಂತಹ ತಲೆಹೊಟ್ಟಿನ ನಿವಾರಣೆ ಮಾಡಲು ಮನೆಯಲ್ಲೇ ತಯಾರಿಸಿರುವ ಕೆಲವೊಂದು ತೈಲಗಳನ್ನು ಬಳಸಿಕೊಳ್ಳಬೇಕು. ಇದು ತುಂಬಾ ಪರಿಣಾಮಕಾರಿ. ಇದನ್ನು ಹೇಗೆ ಬಳಸಿಕೊಳ್ಳಬೇಕೆಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ...

ನಿಂಬೆರಸದೊಂದಿಗೆ ತೆಂಗಿನ ಎಣ್ಣೆ


ಇದನ್ನು ಹೆಚ್ಚಿನ ಮನೆಗಳಲ್ಲಿ ಬಳಸಿಕೊಳ್ಳುತ್ತಾರೆ. ತೆಂಗಿನ ಎಣ್ಣೆಯು ತಲೆಬುರುಡೆಗೆ ಮೊಶ್ವಿರೈಸರ್ ನೀಡುವುದು ಮತ್ತು ನಿಂಬೆರಸವು ನೈಸರ್ಗಿಕವಾಗಿ ತಲೆಹೊಟ್ಟನ್ನು ನಿವಾರಣೆ ಮಾಡುವುದು. ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ಕೆಲವು ಹನಿ ನಿಂಬೆರಸವನ್ನು ಹಾಕಿ ಮತ್ತು ಬೆರಳುಗಳನ್ನು ಬಳಸಿಕೊಂಡು ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ.

ತಲೆಗೆ ಸ್ನಾನ ಮಾಡುವ ಎರಡು ಗಂಟೆಗೆ ಮೊದಲು ಈ ಎಣ್ಣೆ ಹಚ್ಚಿಕೊಳ್ಳಿ


ಈ ತೈಲವು ರಕ್ತಸಂಚಾರವನ್ನು ಉತ್ತಮಪಡಿಸಿ ಕೂದಲು ಬೆಳೆಯಲು ನೆರವಾಗುವುದು. ತಲೆಗೆ ಸ್ನಾನ ಮಾಡುವ ಎರಡು ಗಂಟೆಗೆ ಮೊದಲು ಈ ಎಣ್ಣೆ ಹಚ್ಚಿಕೊಳ್ಳಿ.

ದಾಸವಾಳದ ಎಣ್ಣೆ


ತಲೆಹೊಟ್ಟು ಹೆಚ್ಚಾಗಿದ್ದು ಸತತವಾಗಿ ತಲೆ ತುರಿಕೆಯಾಗುತ್ತಿದೆಯೇ? ಇದಕ್ಕೆ ದಾಸವಾಳದ ಎಣ್ಣೆ ಉತ್ತಮ ಪರಿಹಾರವಾಗಿದೆ. ನಿಯಮಿತವಾಗಿ ದಾಸವಾಳದ ಎಣ್ಣೆಯನ್ನು ತಲೆಗೆ ಹಚ್ಚುತ್ತ ಬರುವ ಮೂಲಕ ಶೀಘ್ರವೇ ತಲೆಹೊಟ್ಟು ಇಲ್ಲವಾಗಿ ತುರಿಕೆಯೂ ಇಲ್ಲವಾಗುತ್ತದೆ. ಮಾರುಕಟ್ಟೆಯಲ್ಲಿ ಈ ಎಣ್ಣೆ ಸಿಗದೇ ಇದ್ದರೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.

ಇದಕ್ಕಾಗಿ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಇದರಲ್ಲಿ ಪೂರ್ಣ ಮುಳುಗುವಂತೆ ಕೆಲವು ದಾಸವಾಳದ ಹೂವಿನ ದಳಗಳನ್ನು ಜಜ್ಜಿ ಇದರೊಂದಿಗೆ ಕೆಲವು ನೆಲ್ಲಿಕಾಯಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ ಚಿಕ್ಕ ಉರಿಯಲ್ಲಿ ಕುದಿಯಲು ಬಿಡಿ. ಸುಮಾರಾಗಿ ಎಲ್ಲಾ ಹೂವಿನ ದಳಗಳು ಕರಗಿವೆ ಅನ್ನಿಸಿದ ಬಳಿಕ ಇಳಿಸಿ ಹಾಗೇ ತಣಿಯಲು ಬಿಡಿ. ಬಳಿಕ ಇದನ್ನು ಬಟ್ಟೆಯಲ್ಲಿ ಹಾಕಿ ಹಿಂಡಿ ಸೋಸಿ ಬಳಸಿ.

ಎಳ್ಳೆಣ್ಣೆ

ತಲೆಹೊಟ್ಟು, ಕೂದಲು ಉದುರುವುದ, ತಲೆಬುರುಡೆ ಒಣಗುವ ಸಮಸ್ಯೆಗಳಿಗೆ ಇದು ಒಳ್ಳೆಯ ಪರಿಹಾರವಾಗಿದೆ. ಎಳ್ಳೆಣ್ಣೆಯನ್ನು ಬಿಸಿ ಮಾಡಿ ತಲೆಬುರುಡೆಗೆ ಹಚ್ಚಿಕೊಳ್ಳಿ. ಅಗತ್ಯವಿದ್ದರೆ ಇದಕ್ಕೆ ನಿಂಬೆರಸ ಹಾಕಿಕೊಳ್ಳಿ. ಕೂದಲನ್ನು ತೊಳೆಯುವ ಕೆಲವು ಗಂಟೆಗಳ ಮೊದಲು ಈ ಎಣ್ಣೆ ಹಚ್ಚಿಕೊಳ್ಳಿ.

ಮೊಸರು, ಬಾದಾಮಿ ಎಣ್ಣೆ ಮತ್ತು ನಿಂಬೆರಸ


ತಲೆಹೊಟ್ಟನ್ನು ನಿವಾರಣೆ ಮಾಡುವಲ್ಲಿ ಮೊಸರು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದು ಕೂದಲನ್ನು ಕಾಂತಿಯುತ ಹಾಗೂ ರೇಷ್ಮೆಯಂತೆ ಹೊಳೆಯುವಂತೆ ಮಾಡುವುದು. ಬಾದಾಮಿ ಎಣ್ಣೆಯು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ತಲೆಬುರುಡೆಗೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.

ಸೌಂದರ್ಯ ಸಲಹೆಗಳು - 05 : ಸೌಂದರ್ಯ ಟಿಪ್ಸ್ - ಇದು ಸೋಮಾರಿ ಹುಡುಗಿಯರಿಗೆ ಮಾತ್ರ!

ಯಾರಿಗೆ ತಾನೇ ತಮ್ಮ ತ್ವಚ್ಛೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಆಸೆಯಿರುವುದಿಲ್ಲ? ವಿಶೇಷವಾಗಿ ಹುಡುಗಿಯರು ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಹಾಗೂ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತಾರೆ. ಆದರೆ ಕೆಲವು ಗುಂಪಿನ ಹುಡುಗಿಯರು ಮಾತ್ರ ಸೋಮಾರಿತನದಿಂದ ಕೂಡಿದ್ದು, ತಮ್ಮ ತ್ವಚೆಯ ಸೌಂದರ್ಯವನ್ನು ಕಾಪಾಡುವ ಗೋಜಿಗೆ ಹೋಗುವುದಿಲ್ಲ. ಆದರೂ ಸಹ ಈ ಸೋಮಾರಿ ಹುಡುಗಿಯರು ತಮಗೆ ಕಾಂತಿಯುತ ತ್ವಚೆ ಹಾಗೂ ಉತ್ತಮ ಸೌಂದರ್ಯದ ನಿರೀಕ್ಷೆಯಲ್ಲಿರುತ್ತಾರೆ. ನೀವೂ ಸಹ ಇದೇ ವರ್ಗದವರೇ?

ಹೌದು ಎಂದಾದಲ್ಲಿ ನೀವು ಸರಿಯಾದ ತಾಣದಲ್ಲೇ ಬಂದಿದ್ದೀರಿ. ಇಲ್ಲಿ ನಿಮ್ಮಂತಹ ಸೋಮಾರಿ ಹುಡುಗಿಯರಿಗೆ ತಮ್ಮ ಕಾಂತಿಯುತದ ತ್ವಚೆಯನ್ನು ಹೆಚ್ಚಿಸುವ ಸರಳ ವಿಧಾನಗಳನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ. ತ್ವಚೆಯನ್ನು ಕಾಂತಿಯುತಗೊಳಿಸಲು ಹೆಚ್ಚಿನ ಶ್ರಮದ ಅಗತ್ಯವಿಲ್ಲ. ನಿಮ್ಮ ತ್ವಚೆಯ ಬಣ್ಣವು ಹಾಗೂ ಅದರ ವಿನ್ಯಾಸ ವ್ಯವಸ್ಥೆಯು ಉತ್ತಮವಾಗಿಸಲು ಅಗತ್ಯವಾದ ಕೆಲವು ಸರಳ ಆರೈಕೆಯ ಪದ್ಧತಿಯನ್ನು ಅನುಸರಿಸಿದರೆ ಸಾಕು.

ಹೌದು ನಿಮಗೆ ಒಣ ಅಥವಾ ಜಿಡ್ಡಿನ ತ್ವಚೆಯಿದ್ದರೆ ಸ್ವಲ್ಪ ಹೆಚ್ಚು ಆರೈಕೆಯ ಅವಶ್ಯಕತೆಯಿದೆ. ಇಲ್ಲವಾದರೆ ನಾವು ಹೇಳುವ ವಿಧಾನಗಳು ಅತ್ಯಂತ ಸರಳವಾಗಿದ್ದು ಸೋಮಾರಿ ಹುಡುಗಿಯರಿಗೆ ನಿಜಕ್ಕೂ ವರದಾನವಾಗಿದೆ. ಹಾಗಿದ್ದಲ್ಲಿ ತಡವೇಕೆ, ವಿವಿಧ ವಿಧಾನಗಳ ಪದ್ಧತಿಯನ್ನು ನಿಮಗಾಗಿ ನೀಡಿದ್ದು, ಮುಂದೆ ಓದಿ....

ನೀರನ್ನು ಹೆಚ್ಚೆಚ್ಚು ಕುಡಿಯಿರಿ


ನೀರು ದೇಹಕ್ಕೆ ಹಾಗೂ ತ್ವಚೆಗೆ ಅತ್ಯಂತ ಉಪಯುಕ್ತ. ನಿಮ್ಮ ಕಾಂತಿಯುತ ತ್ವಚೆಯನ್ನು ಕಾಪಾಡಲು ಹಾಗೂ ತ್ವಚೆಯ ವಿನ್ಯಾಸ ವ್ಯವಸ್ಥೆಯನ್ನು ಉತ್ತಮಗೊಳಿಸಲು ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರನ್ನು ಕುಡಿಯಲು ಮರೆಯದಿರಿ. ಇದು ನಿಮ್ಮ ತ್ವಚೆಗೆ ಒಳಗಿನಿಂದ ತೇವಾಂಶ ನೀಡಿ ನಿಮ್ಮ ತ್ವಚೆಯನ್ನು ಮೃದುಗೊಳಿಸಿ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.

ನಿಮ್ಮ ಮುಖವನ್ನು ಆಗಾಗ ಸ್ವಚ್ಛಗೊಳಿಸಿ


ನಮ್ಮ ಸುತ್ತಮುತ್ತಲಿನ ಗಾಳಿಯು ಹೆಚ್ಚು ರಾಸಾಯನಿಕಯುಕ್ತ ಹಾಗೂ ವಿಷಕಾರಿಯಾಗಿರುವುದರಲ್ಲಿ ಸಂದೇಹವೇ ಇಲ್ಲ. ನೀವು ಮನೆಯ ಒಳಗಿರಲಿ ಅಥವಾ ಹೊರಗಿರಲಿ, ಗಾಳಿಯಲ್ಲಿರುವ ದೂಳಿನ ಅಂಶವು ಮುಖದ ತ್ವಚೆಯಲ್ಲಿರುವ ಚಿಕ್ಕ ಚಿಕ್ಕ ರಂಧ್ರಗಳನ್ನು ಮುಚ್ಚುವುದರಿಂದ ಹೆಚ್ಚು ನೋವುಂಟು ಮಾಡುತ್ತದೆ. ಇದರಿಂದ ಮುಖದಲ್ಲಿನ ಕಲೆಗಳು ಹೆಚ್ಚಾಗಿ ಹಾಗೆಯೇ ಉಳಿಯುವಂತೆ ಮಾಡುತ್ತದೆ. ಮುಖವನ್ನು ದಿನಕ್ಕೆ ಕನಿಷ್ಠ 3 ಬಾರಿ ತೊಳೆಯುವಂತೆ ನೋಡಿಕೊಳ್ಳಿ. ನಂತರ ನೀರನ್ನು ಮುಖಕ್ಕೆ ಎರಚಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ತ್ವಚೆಯನ್ನು ಮೃದುಗೊಳಿಸಲು ನೆರವಾಗುತ್ತದೆ.

ಮಲಗುವ ಮುನ್ನ ಮೇಕಪ್ ತೆಗೆಯಿರಿ

ಹೆಚ್ಚಿರಲಿ ಅಥವಾ ಕಡಿಮೆಯಿರಲಿ ಮೇಕಪ್ ಎಂಬುದು ರಾಸಾಯನಿಕ ಪ್ರಕ್ರಿಯೆ. ಮೇಕಪ್ ನೊಂದಿಗೆ ಮಲಗಿದರೆ ಅದು ತ್ವಚೆಯನ್ನು ಹಿಂಸಿಸುತ್ತದೆ. ಇದನ್ನು ನೀವು ನಂಬಲೇಬೇಕು. ಹೌದು, ಕೆಲವು ಸೋಮಾರಿ ಹುಡುಗಿಯರು ತಾವು ಮಲಗುವ ಮುನ್ನ ಮೇಕಪ್ ತೆಗೆಯಲು ಹಿಂಜರಿಯುತ್ತಾರೆ. ಆದರೆ ಇದು ತಮ್ಮ ತ್ವಚೆಗೆ ಸಹಕಾರಿಯೆಂದು ಅವರಿಗೆ ಅರಿವೇ ಇರುವುದಿಲ್ಲ.

ಸಾಕಷ್ಟು ನಿದ್ರಿಸುವುದನ್ನು ಅಭ್ಯಾಸ ಮಾಡಿ


ಸೋಮಾರಿ ಹುಡುಗಿಯರಿಗೆ ತಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಇದೊಂದು ಸರಳ ವಿಧಾನ. ನೀವು ಹೆಚ್ಚು ಮಲಗಿದಷ್ಟು ನಿಮಗೆ ಹೆಚ್ಚು ಉಪಯೋಗಕರ. ಇದರಿಂದ ನಿಮ್ಮ ದೇಹದ ಸಂಚಲನ ವ್ಯವಸ್ಥೆಯು ಸುಧಾರಿಸುತ್ತದೆ. ನೀವು ಕಣ್ಮುಚ್ಚಿ ಮಲಗಿದಾಗ ನಿಮ್ಮ ದೇಹವನ್ನು ಒಳಗಿನಿಂದ ಉಲ್ಲಸಿತಗೊಳಿಸಿ ತ್ವಚೆಯ ಅಂದವನ್ನು ಹೆಚ್ಚಿಸುವುದಲ್ಲದೆ ಮುಂದಿನ ದಿನದ ಸವಾಲುಗಳನ್ನು ಸುಲಭವಾಗಿ ಸ್ವೀಕರಿಸಲು ನೆರವಾಗುತ್ತದೆ.

ಸೌಂದರ್ಯ ಸಲಹೆಗಳು - 04 : ಸುಂದರ ಚರ್ಮಕ್ಕಾಗಿ ಗ್ರೀನ್ ಟೀ

ಪ್ರತಿದಿನ ತಪ್ಪದೆ ಗ್ರೀನ್ ಟೀಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ದೂರವಾಗುತ್ತದೆ. ಶರೀರದ ವ್ಯರ್ಥಗಳು ದೂರವಾಗುತ್ತದೆ.ಅದರಿಂದ ಚರ್ಮಕ್ಕೂ ಸಹ ಲಾಭ ಆಗುತ್ತದೆ. 

* ಮೊಡವೆಗಳು ಮತ್ತು ಅದರಿಂದ ಆಗುವ ಮಚ್ಚೆಗಳು ದೂರವಾಗಲು ಮುಖದ ಮೇಲೆ ಗ್ರೀನ್ ಟೀ ಹಚ್ಚಿರಿ. 
ಈ ರೀತಿ ಮಾಡುವುದರಿಂದ ಈ ಸಮಸ್ಯೆಗೆ ಬೈ ಹೇಳ ಬಹುದಾಗಿದೆ. ಟೀ ದ್ರಾವಣದಲ್ಲಿ ಮೃದುವಾದ ಬಟ್ಟೆಯಿಂದ ಅದ್ದಿ ಇಡಿ ಮುಖಕ್ಕೆ ನಿಧಾನವಾಗಿ ಹಚ್ಚಿರಿ. 
*ಎರಡು ಟೀ ಸ್ಪೂನ್ ಟೀ ಪುಡಿಯನ್ನು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ ಅದನ್ನು ಮುಖಕ್ಕೆ ಲೇಪಿಸಿ ಒಂದು ಗಂಟೆ ಬಳಿಕ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ.
*ಚರ್ಮ ತಾಜಾವಾಗಿರಲು ಮೂರು ಚಮಚೆ ಗ್ರೀನ್ ಟೀ ಪುಡಿಗೆ ಸ್ವಲ್ಪ ಮೊಟ್ಟೆಯ ಬಿಳಿಯ ಭಾಗ , ಸ್ವಲ್ಪ ನಿಂಬೆ ರಸ ಮತ್ತು ಜೇನು ಮಿಶ್ರ ಮಾಡಿ ಇದನ್ನು ಮುಖ ಮತ್ತು ಕುತ್ತಿಗೆಗೆ ಲೇಪಿಸಿ ಸ್ವಲ್ಪ ಸಮಯದ ಬಳಿಕ ಸ್ವಚ್ಚಗೊಳಿಸಿ. 
*ಜೇನು ಮತ್ತು ಟೀ ಪುಡಿಯ ಮಿಶ್ರಣದಲ್ಲಿ ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿ ಇದರಿಂದ ಸತ್ತ ಮೃತ ಕಣಗಳು ದೂರವಾಗುತ್ತದೆ. 
* ತಲೆ ಸ್ನಾನ ಆದ ಬಳಿಕ ಸ್ವಲ್ಪ ಗ್ರೀನ್ ಟೀ ದ್ರಾವಣವನ್ನು ತೆಗೆದುಕೊಂಡು ಕೂದಲನ್ನು ತೊಳೆದರೆ ಕೇಶದ ಆರೋಗ್ಯ ಸುಸ್ಥಿರವಾಗಿರುತ್ತದೆ.

ಸೌಂದರ್ಯ ಸಲಹೆಗಳು - 03 : ಉಗುರಿನ ಸಂರಕ್ಷಣೆ-ಸುಂದರ ಉಗುರಿನ ಒಡೆಯರಾಗಬೇಕೇ?

ಸಾಮಾನ್ಯವಾಗಿ ಪೆಡಿಕ್ಯೂರ್ ಮತ್ತು ಮ್ಯಾನಿಕುರ್ ಮಾಡಿಕೊಳ್ಳುವುದರಿಂದ ನಾವು ಉಗುರಿನ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದಾಗಿದೆ. ಆದರೆ ಅದನ್ನು ಹೊರತು ಪಡಿಸಿಯೂ ನೀವು ಗಮನ ಕೊಟ್ಟು ಮಾಡಿಕೊಳ್ಳುವ ಅನೇಕ ಉಪಚಾರಗಳು ಉಗುರಿನ ರಕ್ಷಣೆ ಮಾಡುತ್ತದೆ.



ಕೆಳಗೆ ನೀಡಿರುವ ಅಂಶಗಳತ್ತ ಗಮನ ನೀಡಿದರೆ ಸುಂದರ ಉಗುರಿನ ಒಡೆಯರಾಗುತ್ತೀರಿ ನಿಸ್ಸಂಶಯವಾಗಿ. ಮಾಡ ಬೇಕಾಗಿರುವುದು: ನೀವು ನೈಲ್ ಪಾಲಿಶ್ ತೆಗೆದ ಬಳಿಕ ತಪ್ಪದೆ ಕೈ ಮತ್ತು ಉಗುರಿಗೆ ಮಾಯಿಶ್ಚರೈಸರ್ ಕ್ರೀಮ್ ಲೇಪಿಸಿ ನಿಮ್ಮ ಕೈಗಳನ್ನು ನಿಧಾನವಾಗಿ ಸೋಪಿನಿಂದ ಉಜ್ಜಿ ತೊಳೆಯಿರಿ.


ಒಂದು ಸರಳ ಪ್ಯಾಕ್ ಹಾಕಿರಿ. ಈ ಪ್ರಕ್ರಿಯೆಯಿಂದ ಚರ್ಮದಲ್ಲಿ ಅಡಗಿರುವ ಸತ್ತ ಕಣಗಳು ಹೊರ ಬಂದು ಚರ್ಮವು ತಾಜವಾಗುತ್ತದೆ.
ನೀವು ಆರೈಕೆ ಮಾಡಿಸಿಕೊಳ್ಳುವ ಸೆಲೂನ್ ಶುಚಿಯಾಗಿದ್ದಾರೆ ಮಾತ್ರ ಅವರ ಸೇವೆ ಪಡೆಯಿರಿ.. ಇದು ನಿಮ್ಮ ಉಗುರಿನ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ.

ನೀವು ಹೆಚ್ಚು ಬಾರಿ ಪೆಡಿಕ್ಯೂರ್ ಮತ್ತು ಮ್ಯಾನಿಕ್ಯೂರ್ ಮಾಡಿಕೊಳ್ಳುತ್ತಿದ್ದರೆ ನಿಮ್ಮದೇ ಸ್ವಂತ ಪೆಡಿಕ್ಯೂರ್ -ಮ್ಯಾನಿಕ್ಯೂರ್ ಸೆಟ್ ಮನೆಯಲ್ಲಿ ತಂದಿಟ್ಟು ಕೊಂಡು ಬಳಸುವುದು ಎಲ್ಲ ರೀತಿಯಿಂದಲೂ

ಸೂಕ್ತ. ನೀವು ಬಳಸುವ ಉಪಕರಣಗಳು ಸ್ವಚ್ಛವಾಗಿರುವಂತೆ ನೋಡಿ ಕೊಳ್ಳಿ ನೀವು ಉಗುರುಗಳಿಗೆ ಬಳಸುವ ಪಾಲೀಶ್ 3 ರಿಂದ 5 ಕ್ಕಿಂತ ಹೆಚ್ಚು ಲೇಪಿಸದಿರಿ .. ಅತಿಯಾಗಿ ಹಚ್ಚಿದರೆ ಒಣಗುವುದು ತುಂಬಾ ತಡವಾಗುತ್ತದೆ.